ಕನ್ನಡ ಪ್ರೇಮಿಗಳೇ, ದಿನನಿತ್ಯ ನಾವು ನಮ್ಮ ಆಡುಭಾಷೆಯಲ್ಲಿ ಹಲವು ಆಂಗ್ಲ ಪದಗಳನ್ನು ಬಳಸುತ್ತಾ ಬಂದಿದ್ದೇವೆ. ಅಂತಹ ಪ್ರತಿಯೊಂದು ಆಂಗ್ಲ ಪದಕ್ಕೆ ಕನ್ನಡದಲ್ಲಿ ಸುಲಭ ಪರ್ಯಾಯ ಪದವಿದ್ದರೆ ನಮ್ಮ ಭಾಷೆ ಎಷ್ಟು ಪರಿಪೂರ್ಣವೆನಿಸುತ್ತದೆಯಲ್ಲವೆ? ಈ ನಿಟ್ಟಿನ ಪುಟ್ಟ ಪ್ರಯತ್ನ ಇದಾಗಿದೆ. ಈ ಗುಂಪಿನಲ್ಲಿ ಸಮಕಾಲೀನ ಆಂಗ್ಲ ಪದಕ್ಕೆ ಅಚ್ಚ ಕನ್ನಡ ಪದವನ್ನು ಕಂಡುಕೊಳ್ಳುವ ಮತ್ತು ಕಟ್ಟುವ ಪ್ರಯತ್ನ ಮಾಡಲಾಗುವುದು. ಈ ಮುಕ್ತ ಗುಂಪಿಗೆ ಕನ್ನಡವನ್ನು ಹೆಚ್ಚು ಅರಿಯಲು ಮತ್ತು ಬೆಳೆಸಲಿಚ್ಚಿಸುವರೆಲ್ಲರಿಗೂ ಸುಸ್ವಾಗತ. ಸದಸ್ಯರು ಪ್ರತಿದಿನ ಹೊಸ ಆಂಗ್ಲ/ಅನ್ಯ ಭಾಷಾಪದಗಳಿಗೆ, ಕನ್ನಡದ ಪದಗಳಾದರೂ ಬಳಕೆಯಲ್ಲಿ ಹಿಂದುಳಿದ, ಗದ್ಯ ಪದ್ಯಗಳಲ್ಲಿನ ಪದಸಂಪತ್ತಿನ ಗೂಢಾರ್ಥಗಳ ಚರ್ಚೆ, ಕನ್ನಡದ ಸಮಾನ ಪದಗಳ ಹುಡುಕಾಟ ಇತ್ಯಾದಿಯಲ್ಲಿ ತೊಡಗಬಹುದು. ನೀವೇನು ಚರ್ಚಿಸಬಯಸುತ್ತೀರೆಂಬುದನ್ನೂ ಮರೆಯದೇ ಕೇವಲ ಕನ್ನಡ ಲಿಪಿಯಲ್ಲಿ ತಿಳಿಸಿ. ಕನ್ನಡವಲ್ಲದ ಬೇರೆ ಯಾವುದೇ ಲಿಪಿಯಿದ್ದರೂ ಅಂಥವುಗಳನ್ನು ಅಳಿಸಲಾಗುವದು. ಅಸಂಬದ್ಧ ಪ್ರಕಟಣೆಗಳು ಹಾಗು ಹಾಳು ಹರಟೆಗೆ ಇಲ್ಲಿ ಅವಕಾಶವಿಲ್ಲ. ಬನ್ನಿ ಕನ್ನಡವನ್ನು ಬೆಳೆಸೋಣ. ಬನ್ನಿ ಕನ್ನಡವನ್ನು ಬೆಳೆಸೋಣ.
ಎಲ್ಲರನ್ನೂ ಪದಗಳ ಅರ್ಥ ಕೇಳುವ ಮೊದಲು ದಯವಿಟ್ಟು ನಿಘಂಟು ನೋಡಿದರೆ, ನಿಮ್ಮ ಪ್ರಶ್ನೆಯ ಉತ್ತರ ಅಲ್ಲಿಯೇ ದೊರೆತು, ಮಿಕ್ಕವರ ಸಮಯ ಉಳಿಯಬಹುದು. ಅದರ ಮೇಲೆಯೂ ಪ್ರಶ್ನೆಯಿದ್ದರೆ, ಪೂರ್ಣ ಮಾಹಿತಿ, ನಿಮ್ಮ ತರ್ಕ, ಅಭಿಪ್ರಾಯ ತಿಳಿಸಿದರೆ ಮಿಕ್ಕ ಸದಸ್ಯರಿಗೆ ಉತ್ತರಿಸಲು ಸುಲಭ. ಚರ್ಚೆಯೂ ಉಪಯುಕ್ತವಾಗಿರುತ್ತದೆ.
ಇಲ್ಲಿ ಏಳು ನಿಘಂಟುಗಳೂ ಲಭ್ಯ. http://baraha.com/kannada/index.php
ಇಲ್ಲಿ ಎಂಟು ಸಂಪುಟಗಳ ಕಸಾಪ ನಿಘಂಟುಗಳು ಲಭ್ಯ. http://kannada.bharatavani.in/
ಸಮೂಹಕ್ಕೆ ಸೇರಬಯಸುವವರು ಏಕೆ ಸೇರಲು ಬಯಸುತ್ತೀರಿ ಎಂದು ಒಂದು ಪುಟ್ಟ ಸಂದೇಶವನ್ನು ನಿರ್ವಾಹಕರಲ್ಲೊಬ್ಬರಿಗೆ ಸಂದೇಶದ ಮೂಲಕ ತಿಳಿಸಿದರೆ ಸದಸ್ಯತ್ವಕ್ಕೆ ಅನುಮೋದನೆಗೆ ಅನುಕೂಲ. ಸಿರಿಗನ್ನಡಂ ಗೆಲ್ಗೆ!
Copyright © www.padarthachintamani.com 2017